ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟ
ಪರಿಚಯ ಪ್ರಕಾಶನ ಅಕ್ಷರ ಪ್ರೀತಿಯಿಂದ ಸೃಷ್ಟಿಯಾದ ಸಂಸ್ಥೆ
ವೈವಿಧ್ಯಮಯ ಸಾಹಿತ್ಯ ಚಟುವಟಿಕೆಗಳು ಪರಿಚಯ ಪ್ರಕಾಶನದ ಪ್ರಮುಖ ಆಸಕ್ತಿಗಳು. ಇದರ ಹರವು ಆರಂಭದಲ್ಲಿ ಒರತೆಯಂತೆ ಕಂಡರೂ ಕಾಲಾನಂತರದಲ್ಲಿ ಅನಂತವಾಗಿ ಹರಿಯುತ್ತದೆನ್ನುವ ವಿಶ್ವಾಸ ನಮ್ಮದು. ನಿಮ್ಮಿಂದಲಷ್ಟೇ ಆ ಹರಿಯುವಿಕೆ ಸಾಧ್ಯ. ಮಕ್ಕಳಲ್ಲಿ ಹಾಗೂ ಯುವ ಜನರಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಬೇಕೆಂಬ ಮಹಾತ್ವಾಕಾಂಕ್ಷೆ ನಮ್ಮದು.
ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆ, ಪಠ್ಯಪುಸ್ತಕ, ವ್ಯವಹಾರ ಅಭಿವೃದ್ಧಿ, ವ್ಯಕ್ತಿತ್ವ ವಿಕಸನ, ಮಕ್ಕಳ ಸಾಹಿತ್ಯ ಇವುಗಳಲ್ಲದೇ, ಮತ್ತಿತರ ಎಲ್ಲಾ ಪ್ರಕಾರಗಳ ಕನ್ನಡ ಮತ್ತು ಇಂಗ್ಲೀಷ್ ಪುಸ್ತಕಗಳನ್ನು ಪ್ರಕಟಿಸಿ, ಓದುಗರ ಮನೆಯ ಬಾಗಿಲಿಗೇ ತಲುಪಿಸಲು ನಾವು ಸಿದ್ದರಿದ್ದೇವೆ.